== ಪ್ರಶಸ್ತಿ ಪರಿಚಯ == ಪದ್ಮ ವಿಭೂಷಣ ಭಾರತದ ಎರಡನೇ ಅತಿ ದೊಡ್ಡ ನಾಗರಿಕ ಪುರಸ್ಕಾರವಾಗಿದೆ. ಇದು ಒಂದು ಪದಕ ಮತ್ತು ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ. ಇದನ್ನು ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ. ಪದ್ಮ ವಿಭೂಷಣವನ್ನು ಜನವರಿ ೨, ೧೯೫೪ ರಂದು ಸ್ಥಾಪಿಸಲಾಯಿತು. ಇದರ ಆದ್ಯತೆ ಭಾರತ ರತ್ನದ ನಂತರ ಹಾಗೂ ಪದ್ಮ ಭೂಷಣಕ್ಕಿಂತ ಮೇಲೆ. ಸರಕಾರೀ ಸೇವೆಯನ್ನೊಳಗೊಂಡು ದೇಶದ ಯಾವುದೇ ವಿಭಾಗದಲ್ಲಿ ಅಸಾಧಾರಣ ಮತ್ತು ವಿಖ್ಯಾತ ಸೇವೆಯನ್ನು ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಈ ಪ್ರಶಸ್ತಿಯನ್ನು ಜುಲೈ ೧೩ ೧೯೭೭ ರಿಂದ ಜನವರಿ ೨೬ ೧೯೮೦ ರ ಅವಧಿಯ ನಡುವೆ ತಡೆಹಿಡಿಯಲಾಗಿತ್ತು. ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣತಂತ್ರ ದಿನದ ಶುಭೋತ್ಸವದ ದಿನದಂದು ಘೋಷಿಸಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿಗಳ ಹಸ್ತದಿಂದ ಸನ್ಮಾನ ಮಾಡಲಾಗುತ್ತಿದೆ. ಪದ್ಮ ಪ್ರಶಸ್ತಿಗಳ ಕ್ರಮ ಹೀಗಿದೆ : ಪದ್ಮ ವಿಭೂಷಣ ಎರಡನೆಯ ಕ್ರಮದಲ್ಲಿದೆ. ಪದ್ಮಭೂಷಣ ಮೂರನೆಯ ಕ್ರಮದಲ್ಲಿದೆ. ಪದ್ಮಶ್ರೀ ನಾಲ್ಕನೆಯ ಕ್ರಮದಲ್ಲಿದೆ. == ಪುರಸ್ಕೃತರ ಪಟ್ಟಿ == == ಉಲ್ಲೇಖಗಳು ==